ಎಲೆಕ್ಟ್ರಿಕ್ ವಾಹನಗಳ ಖರಿದಿಯಲ್ಲಿ ಮೂರನೇ ಸ್ಥಾನದಲ್ಲಿದೆ ನಮ್ಮ ರಾಜ್ಯ ...!
25 Apr, 2024
ಬೆಂಗಳೂರು : ಈಗ ವಿದ್ಯುತ್ ಚಾಲಿತ ವಾನಗಳದ್ದೇ ಭರಾಟೆ. ಮಾರುಕಟ್ಟೆಯಿಂದ ರಸ್ತೆ ಮೇಲೆ ಹೊಸದಾಗಿ ಬರುತ್ತಿರುವ ಬಹುತೇಕ ವಾಹನಗಳು ಎಲೆಕ್ಟ್ರಿಕ್ ವಾಹನಗಳೆ....!
ಹೀಗಾಗಿ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಪರಿಣಾಮ ಇ- ವಾಹನಗಳ (ಇವಿ) ನೋಂದಣಿ ಸಂಖ್ಯೆಯಲ್ಲಿ ಗಣನೀಯವಾಗದ ಏರಿಕೆ ಕಾಣುತ್ತಿದೆ. ಇದು ಹೊಸತನದ ಪ್ರರ್ವಧಮಾನದ ಸೂಚಕ ಎಂದು ಹೇಳಬಹುದಾಗಿದೆ.
2017-18 ರಲ್ಲಿ 1,922 ಇ-ವಾಹನಗಳು ನೊಂದಣಿಯಾಗಿದ್ದವು. 2023-2024 ರ ಮಾರ್ಚ್ 25 ರವರೆಗೆ 1,59,428 ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿ ಬರುವ ಮೂಲಕ ತನ್ನ ಪ್ರಮಾಣದಲ್ಲಿ ಏರಿಕೆ ತೋರಿಸಿಕೊಟ್ಟಿದೆ. ಇವುಗಳ ಪೈಕಿ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ಕಾರುಗಳು ಸೇರಿವೆ. ರಾಜ್ಯದಲ್ಲಿ ಒಟ್ಟು 3.4 ಲಕ್ಷ ಇ-ವಾಹನಗಳಿದ್ದು, 2.98 ಲಕ್ಷ ದ್ವಿಚಕ್ರ ವಾಹನಗಳು, 23,516 ನಾಲ್ಕು ಚಕ್ರ ಮತ್ತು 18,246 ತ್ರಿಚಕ್ರ ವಾಹನಗಳಿವೆ ಎನ್ನುವ ಮಾಹಿತಿಯನ್ನು ಸಾರಿಗೆ ಇಲಾಖೆ ಭಹಿರಂಗ ಪಡಿಸಿದೆ.

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಿದಾಗ, ಜನರು ಈ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ. ಇವುಗಳನ್ನು ಕೊಳ್ಳುವವರ ಸಂಖ್ಯೆಯು ಕಡಿಮೆಯಾಗಿತ್ತು. ಜನರು ಇ-ವಾಹನಗಳ ಕಾರ್ಯಕ್ಷಮತೆಯ ಬಗ್ಗೆ ನಂಬಿಕೆ ಇಟ್ಟುಕೊಂಡಿರಲಿಲ್ಲ. ಜೊತೆಗೆ ಈ ವಾಹನಗಳನ್ನು ಎಲ್ಲಿ ಚಾರ್ಜಿಂಗ್ ಮಾಡಿಸುವುದು, ಹೆಚ್ಚಿನ ಸಮಯ ವ್ಯವ ಮಾಡಬೇಕು ಎನ್ನುವ ಸಮಸ್ಯೆಗಳನ್ನು ಎದುರಿಸಲಾಗುತ್ತಿತ್ತು. ಆದರೆ ಈಗ ಅದರಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ ಎನ್ನುವುದು ವಾಹನ ತಜ್ಞರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

2017-18ರಲ್ಲಿ ರಾಜ್ಯದಲ್ಲಿ ಕೇವಲ 1,922 ಎಲೆಕ್ಟ್ರಿಕ್ ವಾಹನಗಳಿದ್ದವು. ಅವುಗಳಲ್ಲಿ 97 ದ್ವಿಚಕ್ರ ವಾಹನಗಳು, 1,589 ತ್ರಿಚಕ್ರ ವಾಹನಗಳು ಮತ್ತು 236 ಕಾರುಗಳು ಇದ್ದವು. ಈಗ ಕಾಲ ಬದಲಾಗಿ ಪಟ್ಟಣಗಳು ಮತ್ತು ನಗರಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳು ಮತ್ತು ಮಾರುಕಟ್ಟೆಯಲ್ಲಿ ಅನೇಕ ಇ-ವಾಹನ ಪ್ಲೇಯರ್‌ಗಳು ನಿರ್ಮಾಣವಾಗಿದೆ. ಪರಿಣಾಮ ರಾಜ್ಯದಲ್ಲಿ ಇ- ವಾಹನಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸಾರಿಗೆ ಹೆಚ್ಚುವರಿ ಆಯುಕ್ತರು ಅವರು ಹೇಳಿದ್ದಾರೆ.
ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯಲ್ಲಿನ ಜಿಗಿತಕ್ಕೆ ಮುಖ್ಯ ಕಾರಣ ಜನರಲ್ಲಿ ಪರಿಸರ ಕಾಳಜಿ ಮೂಡುತ್ತಿದೆ. ಕರ್ನಾಟಕ ಸರ್ಕಾರವು ಇಂತಹ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುತ್ತಿದೆ. ರಾಜ್ಯದಲ್ಲಿ 25 ಲಕ್ಷಕ್ಕಿಂತ ಹೆಚ್ಚು ಬೆಲೆಯ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. 2023-2024ರಲ್ಲಿ ನೋಂದಣಿಯಾದ ಎಲೆಕ್ಟ್ರಿಕ್ ವಾಹನಗಳ ಪೈಕಿ ದ್ವಿಚಕ್ರ ವಾಹನಗಳು 1,40,327. ಹೀಗಾಗಿ ಬೈಕ್‌ಗಳೇ ಅಗ್ರಸ್ಥಾನದಲ್ಲಿವೆ. ನಂತರದ ಸ್ಥಾನದಲ್ಲಿ ಕಾರುಗಳಿದ್ದು, ಒಟ್ಟು 13,667 ಕಾರುಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನು, 5,434 ಆಟೋಗಳನ್ನು ನೋಂದಣಿ ಮಾಡಲಾಗಿದೆ ಎನ್ನಲಾಗಿದೆ.
Publisher: ಕನ್ನಡ ನಾಡು | Kannada Naadu